ಬೆಂಗಳೂರು ಎಂಬುದು ಪಿಎನ್ ಸತ್ಯ ನಿರ್ದೇಶಿಸಿದ 2017 ರ ಕನ್ನಡ ಅಪರಾಧ ಚಲನಚಿತ್ರವಾಗಿದೆ. ಇದರಲ್ಲಿ ಆದಿತ್ಯ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಪಾಯಲ್ ರಾಧಾಕೃಷ್ಣ ಮತ್ತು ಡೇನಿಯಲ್ ಬಾಲಾಜಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. == ಕಥಾವಸ್ತು == ಭೂಗತ ಪಾತಕಿ ರಾಮ್/ಮಾಲಿಕ್ ( ಆದಿತ್ಯ ) ಬೆಂಗಳೂರಿನಲ್ಲಿ ರಾಜನಾಗಲು ಬಯಸುತ್ತಾನೆ. ಆದರೆ ಇತರ ಗ್ಯಾಂಗ್‌ನಲ್ಲಿರುವ ಕೆಲವರು ಹಾಗೆ ಆಗುವುದನ್ನು ಬಯಸುವುದಿಲ್ಲ. ರಾಮ್ ಆ ಸ್ಥಾನ ಸಿಗುವವರೆಗೂ ಹೋರಾಟ ನಡೆಸುತ್ತಾನೆ. ಅವನು ಆ ಪ್ರದೇಶದಲ್ಲಿ ಹೇಗೆ ಹಿಡಿತ ಸಾಧಿಸಿದ ಎಂಬುದೇ ಚಿತ್ರದ ಕಥೆ. == ಪಾತ್ರವರ್ಗ == ರಾಮ್/ಮಾಲಿಕ್ ಆಗಿ ಆದಿತ್ಯ ಸಿರಿಶಾ ಪಾತ್ರದಲ್ಲಿ ಪಾಯಲ್ ರಾಧಾಕೃಷ್ಣ ಎಸಿಪಿ ಥಾಮಸ್ ಪಾತ್ರದಲ್ಲಿ ಡೇನಿಯಲ್ ಬಾಲಾಜಿ == ಹಿನ್ನೆಲೆಸಂಗೀತ == ಚಿತ್ರದ ಧ್ವನಿಪಥಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದಾರೆ. ಆಲ್ಬಮ್ ಎರಡು ಧ್ವನಿಮುದ್ರಿಕೆಗಳನ್ನು ಒಳಗೊಂಡಿದೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಬೆಂಗಳೂರು @ ಐ ಎಮ್ ಡಿ ಬಿ